ಮಾಹಿತಿ ಹಕ್ಕು ಕಾಯ್ದೆ - 2005 | ಕರ್ನಾಟಕ ಸರ್ಕಾರ : ಆರ್.ಟಿ.ಐ. ಆನ್‌ಲೈನ್ | ||
ಕರ್ನಾಟಕ
ಎನ್.ಆರ್.ಡಿ.ಎಂ.ಎಸ್ |
ಕರ್ನಾಟಕ
ಜಿಯೋಪೋರ್ಟಲ್
|
||
ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
|
ಸಂಕ್ಷಿಪ್ತ ಅವಲೋಕನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ)ಯು 1975ರಲ್ಲಿ ಸ್ಥಾಪಿತವಾಯಿತು. ರಾಜ್ಯದಲ್ಲಿನ ಜನರ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಜನರ, ಜೀವನಮಟ್ಟವನ್ನು ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ ಅಭಿವೃಧ್ಧಿಕಾರ್ಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಕೈಗೊಳ್ಳುವುದು ಮಂಡಳಿಯ ಸ್ಥಾಪನೆಗೆ ಕಾರಣವಾಗಿದೆ. 54 ಸದಸ್ಯರನ್ನೊಳಗೊಂಡ ಮಂಡಳಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯನ್ನು ಕರ್ನಾಟಕ ಸರ್ಕಾರವು ಮೂರು ವರ್ಷಗಳಿಗೊಮ್ಮೆ ರಚಿಸುತ್ತದೆ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮಂಡಳಿಯ ಉಪಾಧ್ಯಕ್ಷರಾಗಿರುತ್ತಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮಂಡಳಿಯ ಉಪಾಧ್ಯಕ್ಷರಲ್ಲೊಬ್ಬರಾಗಿರುತ್ತಾರೆ ಹಾಗೂ ಇವರು ಕಾರ್ಯಕಾರಿ ಸಮಿತಿಯ ಛೇರ್ಮನ್ ಆಗಿರುತ್ತಾರೆ. ಕಾರ್ಯಕಾರಿ ಸಮಿತಿಯು ಮಂಡಳಿಯ ಆಡಳಿತ ಮತ್ತು ತಾಂತ್ರಿಕ ಚಟುವಟಿಕೆಗಳನ್ನು ಕಾಲಕಾಲಕ್ಕೆ ಪರಾಮರ್ಶಿಸಿ, ಸಲಹೆ ಸೂಚನೆಗಳನ್ನು ನೀಡುತ್ತದೆ. ಪ್ರಸ್ತುತ ರಾಜ್ಯದ ಅಭಿವೃದ್ಧಿಗೆ ಅವಶ್ಯಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಿಕತೆಗಳನ್ನು ಗುರುತಿಸಿವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನೀತಿ-ನಿಯಮಾವಳಿಗಳನ್ನು, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ, ಹೊಸ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿ ರಾಜ್ಯದ ಅಭಿವೃದ್ಧಿಗೆ ಬೇಕಾದ ಯಶಸ್ವಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶಗಳನ್ನು ಸಾಧಿಸಲು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಕೃಷಿ, ನೀರು, ಇಂಧನ, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ವಿವಿಧ ಸ್ತರಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವಿಕೆ ಮುಂತಾದ ವಿಷಯಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಮಂಡಳಿಯು ಆರಿಸಿಕೊಂಡಿದೆ. ಮಂಡಳಿಯು ಕಳೆದ ನಲವತ್ತೆಂಟು ವರ್ಷಗಳಲ್ಲಿ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಸಂಶೋಧನೆ ಮತ್ತು ಪ್ರಾತ್ಯಕ್ಷಿಕತೆ ಹಂತದಿಂದ ಅನುಷ್ಠಾನ ಮತ್ತು ಕಾರ್ಯರೂಪಕ್ಕೆ ತಂದಿದೆ. ಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ರಾಜ್ಯದ ಜನಸಾಮಾನ್ಯರಿಗೆ ಕೊಂಡೊಯ್ಯುವ ಮಂಡಳಿಯ ಹಲವಾರು ಕಾರ್ಯಕ್ರಮಗಳ ಯಶಸ್ಸಿಗೆ ಬಹುಮಟ್ಟಿಗೆ ಕಾರಣವಾಗಿದೆ. ಇದು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇತರೆ ಸಂಶೋಧನಾ ಸಂಸ್ಥೆಗಳ ಜೊತೆಗಿನ ಸಂಬಂಧ ಮತ್ತು ಸಹಕಾರಗಳಿಗೆ ಸಮರ್ಪಕವಾದ ವಾತಾವರಣವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿರುವ ಪ್ರಮುಖ ಸಂಶೋಧನಾ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯಗಳ ಜೊತೆಗೆ ಸಂಬಂಧವನ್ನು ಕಲ್ಪಿಸುತ್ತದೆ. ದೇಶದಲ್ಲಿ ಸ್ಥಾಪಿತವಾದ ಮೊದಲ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಕೂಡ ಒಂದಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇತರ ರಾಜ್ಯಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯನ್ನು ಒಂದು ಮಾದರಿಯನ್ನಾಗಿ ಅನುಸರಿಸಲು ಪ್ರೇರಣೆ ನೀಡುತ್ತಿದೆ. ಮಂಡಳಿಯು ಸ್ಥಾಪನೆಯಾದ 6 ವರ್ಷದ ನಂತರವೇ ಅಂದರೆ 1981ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಸ್ಥಾಪನೆ ಮಾಡಿತು. ಮಂಡಳಿಯು ಕಳೆದ ನಲವತ್ತೆಂಟು ವರ್ಷಗಳಲ್ಲಿ ಸರ್ಕಾರ ಮತ್ತು ವಿಜ್ಞಾನ ಸಮುದಾಯದ ಸಹಕಾರದಿಂದ ಹಲವಾರು ಯಶಸ್ವಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೈಗೊಂಡಿದೆ ಮತ್ತು ಕೈಗೊಳ್ಳಲು ಇತರ ಸಂಸ್ಥೆಗಳಿಗೆ ಸಹಕಾರ ನೀಡಿದೆ. ಅಡುಗೆ ಮಾಡಲು ಮತ್ತು ಬೆಳಕಿನ ವ್ಯವಸ್ಥೆಗೆ ಶಕ್ತಿ, ಕುಡಿಯುವ ನೀರು, ಕೃಷಿ, ಶಿಕ್ಷಣ, ಪರ್ಯಾಯ ಕಟ್ಟಡ ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮ, ಮಳೆನೀರು ಕೊಯ್ಲು ತಂತ್ರಜ್ಞಾನ, ಸಾಂಪ್ರದಾಯಿಕ ನೀರು ಕೊಯ್ಲು ವ್ಯವಸ್ಥೆ, ಬೌದ್ಧಿಕ ಆಸ್ತಿ ಹಕ್ಕುಗಳು, ಜಿಲ್ಲಾ ಮಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರಗಳು (ಎನ್‌ಆರ್‌ಡಿಎಂಎಸ್ ಕೇಂದ್ರ), ಗ್ರಾಮ ಮಾಹಿತಿ ವ್ಯವಸ್ಥೆ, ಕರ್ನಾಟಕ ಡಿಜಿಟಲ್ ಹೆರಿಟೇಜ್, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಇ-ಕಲಿಕಾ ಕೇಂದ್ರಗಳು, ಪ್ರೌಢಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ವ್ಯವಸ್ಥೆ, ಸೆಂಟರ್ ಫಾರ್ ಎಕ್ಸಲೆನ್ಸ್ - ಸೈಬರ್ ಸೆಕ್ಯುರಿಟಿ, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್, ಮೊದಲಾದುವುಗಳು ಮಂಡಳಿಯ ಹಲವಾರು ಯಶಸ್ವಿ ಯೋಜನೆ / ಕಾರ್ಯಕ್ರಮಗಳಲ್ಲಿ ಮುಖ್ಯವಾದುವು. ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ, ಬಡತನದ ನಿವಾರಣೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ಅತಿಮುಖ್ಯ ಪಾತ್ರವನ್ನು ವಹಿಸುತ್ತವೆ.
| ||
ಮುಖ್ಯ ಪ್ರಕಟಣೆ
ಸರ್ ಎಂ. ವಿಶ್ವೇಶ್ವರಯ್ಯ,
"ಆಡಳಿತಾಧಿಕಾರಿ"
https://forms.gle/WxvPQND5RzuP8Te67
ವಿದ್ಯಾರ್ಥಿ
ಯೋಜನೆಗಳ
ಕಾರ್ಯಕ್ರಮ ಗಮನಿಸಿ: ಕೆಲವು ಸಂಸ್ಥೆಗಳು ಯುಟಿಲೈಸೇಶನ್ ಸರ್ಟಿಫಿಕೇಟ್ (ಯುಸಿ) ಮತ್ತು ಯೋಜನಾ ವರದಿಯ ಸಾಫ್ಟ್‌ಕಾಪಿಯನ್ನು ಸಲ್ಲಿಸಿರುವಿದಿಲ್ಲ ಎಂದು ಗಮನಿಸಲಾಗಿದೆ. ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಮೇಲಿನ ಲಿಂಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. UC ಯ ಹಾರ್ಡ್‌ಕಾಪಿಯನ್ನು ಆದಷ್ಟು ಬೇಗ ಕಳುಹಿಸಲು ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ವಿವರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
|
|||
|
|||
|